Updates
SATHYA JOB ALERTS
Latest Jobs
  • Loading updates...
Results
  • Loading updates...
Admit Card
  • Loading updates...
Bank Jobs
  • Loading updates...
RRB Jobs
  • Loading updates...
SSC Jobs
  • Loading updates...
State (KA) Jobs
  • Loading updates...
Other Central Jobs
  • Loading updates...
Scholarships
  • Loading updates...
State Schemes
  • Loading updates...

ರಾಯಚೂರು DHFWS ನೇಮಕಾತಿ 2026: 10ನೇ ತರಗತಿ ಪಾಸ್ ಆದವರಿಗೆ ಸರ್ಕಾರಿ ಉದ್ಯೋಗ


DHFWS Raichur Recruitment 2026: 20 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ರಿ), ರಾಯಚೂರು ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಮತ್ತು ಪಿ.ಎಂ. ಅಭೀಮ್ (PM ABHIM) ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ (Karnataka Govt Jobs) ಅರಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳನ್ನು ಕೆಳಗೆ ಸ್ಪಷ್ಟವಾಗಿ ನೀಡಲಾಗಿದೆ.


1.    1.ನೇಮಕಾತಿ ಮುಖ್ಯಾಂಶಗಳು (Recruitment Overview)

ವಿವರಗಳು (Details)

ಮಾಹಿತಿ (Information)

ಇಲಾಖೆಯ ಹೆಸರು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ರಾಯಚೂರು (DHFWS)

ಹುದ್ದೆಗಳ ಹೆಸರು

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು & ಆರೋಗ್ಯ ನಿರೀಕ್ಷಣಾಧಿಕಾರಿ

ಒಟ್ಟು ಹುದ್ದೆಗಳು

20 ಹುದ್ದೆಗಳು

ಉದ್ಯೋಗದ ಪ್ರಕಾರ

ಗುತ್ತಿಗೆ ಆಧಾರಿತ ಉದ್ಯೋಗ (Contract Basis)

ಉದ್ಯೋಗ ಸ್ಥಳ

ರಾಯಚೂರು, ಕರ್ನಾಟಕ

ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ (Online)

ಅಧಿಕೃತ ವೆಬ್‌ಸೈಟ್

raichur.nic.in / karunadu.karnataka.gov.in/hfw

2.ಹುದ್ದೆಗಳ ವಿವರ ಮತ್ತು ಸ್ಥಳ ನಿಯೋಜನೆ (Vacancy Details & Locations)

ಒಟ್ಟು 20 ಹುದ್ದೆಗಳನ್ನು ಕೆಳಗಿನಂತೆ ವಿಂಗಡಿಸಲಾಗಿದೆ:

·       ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು (PM ABHIM ನಮ್ಮ ಕ್ಲಿನಿಕ್): 18 ಹುದ್ದೆಗಳು.

ಸ್ಥಳಗಳ ವಿವರ: ಮಾನ್ವಿ-03, ಸಿರವಾರ-01, ದೇವದುರ್ಗ-02, ರಾಯಚೂರು-03,         ಅಂಗಸೂಗೂರು-02, ಮಸ್ಕಿ-01, ಸಿಂಧನೂರು-02, ಕವಿತಾಳ-01, ಮುದಗಲ್ಲ-01, ತುರ್ವಿಹಾಳ-01.

·    ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು: 01 ಹುದ್ದೆ.

·     ಆರೋಗ್ಯ ನಿರೀಕ್ಷಣಾಧಿಕಾರಿಗಳು: 01 ಹುದ್ದೆ (ನಗರ ಆರೋಗ್ಯ ಕೇಂದ್ರ ಹರಿಜನವಾಡ-01).

·    (ಗಮನಿಸಿ: ಅನುಬಂಧ-1 ಪ್ರಕಾರ ಕಿರಿಯ ಆರೋಗ್ಯ ಸಹಾಯಕರು ಪುರುಷ (NUHM) - 01 ಹುದ್ದೆ ಎಂದೂ ಉಲ್ಲೇಖಿಸಲಾಗಿದೆ ).

3. ಶೈಕ್ಷಣಿಕ ಅರ್ಹತೆ (Educational Qualification)

·       ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು: ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ತರಬೇತಿಯನ್ನು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳ ಶಾಲೆಗಳಲ್ಲಿ ಪಡೆದಿರಬೇಕು. ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೊಂದಣಿಯಾಗಿರಬೇಕು.

·       ಆರೋಗ್ಯ ನಿರೀಕ್ಷಣಾಧಿಕಾರಿಗಳು: ಎಸ್.ಎಸ್.ಎಲ್.ಸಿ. (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಇದರೊಂದಿಗೆ ಕೆಳಗಿನ ಯಾವುದಾದರೂ ಒಂದು ಅರ್ಹತೆ ಹೊಂದಿರಬೇಕು:

o   ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಹೊಂದಿರಬೇಕು.

o   ಅಥವಾ, ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ ಹೊಂದಿರಬೇಕು.

o   ಅಥವಾ, ಪಿ.ಯು.ಸಿ. (ವಿಜ್ಞಾನ) ತೇರ್ಗಡೆಯಾಗಿರಬೇಕು ಮತ್ತು ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ ಹೊಂದಿರಬೇಕು.

4. ವಯೋಮಿತಿ ಮತ್ತು ಸಡಿಲಿಕೆ (Age Limit & Relaxation)

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿಯನ್ನು ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ (General): ಗರಿಷ್ಠ 40 ವರ್ಷಗಳು.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ (ಗರಿಷ್ಠ 43 ವರ್ಷ).
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 (SC/ST/Cat-1): 5 ವರ್ಷಗಳ ಸಡಿಲಿಕೆ (ಗರಿಷ್ಠ 45 ವರ್ಷ).

5. ಭಾಷಾ ಜ್ಞಾನ ( Language )

·       ಸ್ಥಳೀಯ ಭಾಷೆ ಕನ್ನಡ ಆಗಿರುವುದರಿಂದ ಅಭ್ಯರ್ಥಿಗಳು ಕಡ್ಡಯವಾಗಿ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.

6. ಮಾಸಿಕ ವೇತನ (Salary Details)

ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ರೂ. 14,044/- ರಿಂದ ರೂ. 15,397/- ವರೆಗೆ ಕನ್ಸಾಲಿಡೇಟೆಡ್ (Consolidated) ವೇತನವನ್ನು ನೀಡಲಾಗುವುದು.

7. ಅರ್ಜಿ ಶುಲ್ಕ (Application Fee)

  • ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (Nil). ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

8. ಆಯ್ಕೆ ಪ್ರಕ್ರಿಯೆ ಮತ್ತು ಕೃಪಾಂಕ (Selection Process & Grace Marks)

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ಕೆಳಗಿನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ:                                                                                                                                         

  •  ಮೆರಿಟ್ ಪಟ್ಟಿ (Merit List): ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಪರೀಕ್ಷೆಯಲ್ಲಿ (SSLC ಹಾಗೂ ಡಿಪ್ಲೊಮಾ/ANM) ಪಡೆದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
  • ರೋಸ್ಟರ್ ಪದ್ಧತಿ (Roaster System): ಸರ್ಕಾರದ ಮೀಸಲಾತಿ ಮತ್ತು ರೋಸ್ಟರ್ ನಿಯಮಾನುಸಾರ ಆಯ್ಕೆ ಮಾಡಲಾಗುವುದು.
  • ಮೂಲ ದಾಖಲೆಗಳ ಪರಿಶೀಲನೆ (Document Verification).
  • ಮಾನ್ಯ ಅಧ್ಯಕ್ಷರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಯಚೂರು ಇವರ ಅಧ್ಯಕ್ಷತೆಯಲ್ಲಿ ರೋಸ್ಟರ್ ಕಂ ಮೇರಿಟ್ ನಿಯಮದಡಿ ಆಯ್ಕೆ ಮಾಡಿಕೊಳ್ಳಲಾಗುವುದು.
  • ಅನುಭವಕ್ಕೆ ಕೃಪಾಂಕ: ಈಗಾಗಲೇ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಒಂದು ವರ್ಷಕ್ಕೆ 10 ಅಂಕಗಳಂತೆ ಗರಿಷ್ಠ 2 ವರ್ಷಕ್ಕೆ 20 ಅಂಕಗಳು ಕೃಪಾಂಕ ನೀಡಲಾಗುವುದು (ಕಡ್ಡಾಯವಾಗಿ ಆದೇಶ ಪ್ರತಿ ಹಾಗೂ ಸೇವಾ ಅನುಭವ ಪ್ರಮಾಣ ಪತ್ರ ಸಲ್ಲಿಸುವುದು).
  • ಕೋವಿಡ್-19 ಆದ್ಯತೆ: ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು (ಆದೇಶ ಪ್ರತಿ ಹಾಗೂ ಅನುಭವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ)

9. ಅರ್ಜಿ ಸಲ್ಲಿಸುವುದು ಹೇಗೆ? (How to Apply Online? Step-by-Step Guide)

  1. ಮೊದಲನೆಯದಾಗಿ, ರಾಯಚೂರು ಜಿಲ್ಲೆಯ ಅಧಿಕೃತ ವೆಬ್‌ಸೈಟ್ (raichur.nic.in) ಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ.
  2. ಅಧಿಸೂಚನೆಯನ್ನು (Notification) ಸಂಪೂರ್ಣವಾಗಿ ಮತ್ತು ಎಚ್ಚರಿಕೆಯಿಂದ ಓದಿ, ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  3. ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು (ಆಧಾರ್ ಕಾರ್ಡ್, SSLC ಅಂಕಪಟ್ಟಿ, ANM/ಡಿಪ್ಲೊಮಾ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಸಹಿ) ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
  4. ಕೆಳಗೆ ನೀಡಲಾದ 'Apply Online' ಲಿಂಕ್ ಮೇಲೆ ಕ್ಲಿಕ್ ಮಾಡಿ.
  5. ಕೇಳಲಾದ ಎಲ್ಲಾ ನಿಖರ ಮಾಹಿತಿಯನ್ನು ಭರ್ತಿ ಮಾಡಿ (ಹೆಸರು, ವಿಳಾಸ, ವಿದ್ಯಾರ್ಹತೆ ಇತ್ಯಾದಿ).
  6. ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿಯನ್ನು 'Submit' ಮಾಡಿ.
  7. ಭವಿಷ್ಯದ ಉಪಯೋಗಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ (Printout) ತೆಗೆದುಕೊಳ್ಳಿ.

8.     ಒಬ್ಬರೇ ಅಭ್ಯರ್ಥಿಯು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

9.   ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 371 (ಜೆ) ಅರ್ಹತಾ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.

  1. ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಾಗ ಅವು ಸ್ಪಷ್ಟವಾಗಿ ಕಾಣುವಂತಿರಬೇಕು .

10. ಹೆಚ್ಚಿನ ಮಾಹಿತಿಗಾಗಿ (Contact for More Info)

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯ, ರಾಯಚೂರು ಕಛೇರಿಯನ್ನು ಸಂಪರ್ಕಿಸಬಹುದು.

·    ದೂರವಾಣಿ ಸಂಖ್ಯೆ: 9449843121, 9844193931.

11. ಪ್ರಮುಖ ದಿನಾಂಕಗಳು (Important Dates)

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 25 ಫೆಬ್ರವರಿ 2026
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಮಾರ್ಚ್ 2026 (ಸಂಜೆ 05:00 ಗಂಟೆಯೊಳಗೆ)

12. ಪ್ರಮುಖ ಲಿಂಕ್‌ಗಳು (Important Links)

ಲಿಂಕ್ ವಿವರ (Link Details)

ವೆಬ್‌ಸೈಟ್ ಲಿಂಕ್ (Click Here)

ಆನ್‌ಲೈನ್ ಅರ್ಜಿ ಲಿಂಕ್ (Apply Online)

ಇಲ್ಲಿ ಕ್ಲಿಕ್ ಮಾಡಿ (Click Here)  

ಅಧಿಕೃತ ಅಧಿಸೂಚನೆ PDF (Official Notification PDF) 

ಇಲ್ಲಿ ಕ್ಲಿಕ್ ಮಾಡಿ (Click Here)  

ಅಧಿಕೃತ ವೆಬ್‌ಸೈಟ್ (Official Website)

ಇಲ್ಲಿ ಕ್ಲಿಕ್ ಮಾಡಿ (Click Here) 

 ಸತ್ಯ-ಜಾಬ್‌ಅಲರ್ಟ್ಸ್ ಟೆಲಿಗ್ರಾಮ್ ಸೇರಿ

 ಇಲ್ಲಿ ಕ್ಲಿಕ್ ಮಾಡಿ (Click Here) 

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನೇಮಕಾತಿ 2026: ಕಿರಿಯ ಸಹಾಯಕ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ | ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿ ಕ್ಲಿಕ್ ಮಾಡಿ (Click Here)

13. ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. DHFWS ರಾಯಚೂರು ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಉತ್ತರ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11 ಮಾರ್ಚ್ 2026.

2. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗೆ ಶೈಕ್ಷಣಿಕ ಅರ್ಹತೆ ಏನು?

ಉತ್ತರ: ಅಭ್ಯರ್ಥಿಗಳು ಕಡ್ಡಾಯವಾಗಿ SSLC ಪಾಸ್ ಮಾಡಿರಬೇಕು ಮತ್ತು ANM (Auxiliary Nurse Midwifery) ಕೋರ್ಸ್ ಮುಗಿಸಿ, ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.

3. ನೇಮಕಾತಿಗೆ ಲಿಖಿತ ಪರೀಕ್ಷೆ ಇದೆಯೇ?

ಉತ್ತರ: ಇಲ್ಲ, ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ (ಮೆರಿಟ್) ಮತ್ತು ರೋಸ್ಟರ್ ಪದ್ಧತಿಯ ಮೂಲಕ ನೇರ ಆಯ್ಕೆ ಮಾಡಲಾಗುವುದು.

4. ಹುದ್ದೆಗಳು ಕಾಯಂ ಉದ್ಯೋಗವೇ (Permanent Job)?

ಉತ್ತರ: ಇಲ್ಲ, ಹುದ್ದೆಗಳು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಗುತ್ತಿಗೆ ಆಧಾರದ (Contract Basis) ಹುದ್ದೆಗಳಾಗಿವೆ.

5. ಅರ್ಜಿ ಸಲ್ಲಿಸಲು ಎಷ್ಟು ಶುಲ್ಕ ಪಾವತಿಸಬೇಕು?

ಉತ್ತರ: ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ (ಸಂಪೂರ್ಣ ಉಚಿತ).

ಲೈವ್ ಅಪ್‌ಡೇಟ್‌ಗಳಿಗಾಗಿ ನಮ್ಮೊಂದಿಗೆ ಸೇರಿ!

ಯಾವುದೇ ಪ್ರಮುಖ ಉದ್ಯೋಗ ಮಾಹಿತಿ ಅಥವಾ ಪರೀಕ್ಷೆಯ ಅಪ್‌ಡೇಟ್‌ಗಳನ್ನು ತಪ್ಪಿಸಿಕೊಳ್ಳಬೇಡಿತ್ವರಿತ ಮಾಹಿತಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್‌ಗೆ ಸೇರಿ ಮತ್ತು ಯೂಟ್ಯೂಬ್‌ನಲ್ಲಿ        SATHYA'S KANNADA INFO ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಲು ಮರೆಯದಿರಿ.

Post a Comment

0 Comments