Updates
SATHYA JOB ALERTS
Latest Jobs
  • Loading updates...
Results
  • Loading updates...
Admit Card
  • Loading updates...
Bank Jobs
  • Loading updates...
RRB Jobs
  • Loading updates...
SSC Jobs
  • Loading updates...
State (KA) Jobs
  • Loading updates...
Other Central Jobs
  • Loading updates...
Scholarships
  • Loading updates...
State Schemes
  • Loading updates...

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA): ಪಿಜಿಸಿಇಟಿ (PGCET) 2026 ಆನ್‌ಲೈನ್ ಅರ್ಜಿ ಆಹ್ವಾನ

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA): ಪಿಜಿಸಿಇಟಿ (PGCET) 2026 ಆನ್ಲೈನ್ ಅರ್ಜಿ ಆಹ್ವಾನ (Detailed Notification OUT)

ನಮಸ್ಕಾರ ಸ್ನೇಹಿತರೇ, ಸತ್ಯ ಜಾಬ್ ಅಲರ್ಟ್ ಗೆ ಸುಸ್ವಾಗತ. ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಮಾಡಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಬಹುಮುಖ್ಯವಾದ ಶೈಕ್ಷಣಿಕ ಅಪ್‌ಡೇಟ್ ಇಲ್ಲಿದೆ. ಕರ್ನಾಟಕ ಮತ್ತು ಕರ್ನಾಟೇಕತರ ಅಭ್ಯರ್ಥಿಗಳಿಂದ 2026-27ನೇ ಸಾಲಿನ ಮೊದಲನೆ ವರ್ಷದ ಅಥವಾ 1ನೇ ಸೆಮಿಸ್ಟರ್‌ಗಳ (ಪೂರ್ಣಾವಧಿ / ಅರೆಕಾಲಿಕ) ಎಂಬಿಎ (MBA), ಎಂಸಿಎ (MCA), ಎಂಇ (M.E), ಎಂ.ಟೆಕ್ (M.Tech), ಮತ್ತು ಎಂ.ಆರ್ಕಿಟೆಕ್ಟರ್ (M.Arch) ಕೋರ್ಸುಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಧಿಕೃತ ಅಧಿಸೂಚನೆಯಲ್ಲಿರುವ ಪ್ರತಿಯೊಂದು ಮಾಹಿತಿಯನ್ನುಅರ್ಹತೆಗಳಿಂದ ಹಿಡಿದು ಪರೀಕ್ಷಾ ದಿನಾಂಕದವರೆಗೆನಾನು ವಿಶ್ಲೇಷಿಸಿದ್ದೇನೆ. ಬನ್ನಿ, ಇದರ ಸಂಪೂರ್ಣ ವಿವರಗಳನ್ನು ತಿಳಿಯೋಣ.

🔥 ಸತ್ಯ ಅವರ ವಿಶೇಷ ಸಲಹೆ (Sathya's Personal Opinion & Strategy)

ನನ್ನ ಪ್ರಿಯ ವಿದ್ಯಾರ್ಥಿಗಳೇ, ಪದವಿ ಮುಗಿದ ತಕ್ಷಣ ಉನ್ನತ ವ್ಯಾಸಂಗಕ್ಕೆ ಸೇರುವುದು ನಿಮ್ಮ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು. ನಾನು ಪ್ರಸ್ತುತ ಬ್ಯಾಂಕಿಂಗ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತೆಯೇ, ನಿಮಗೂ PGCET ಪರೀಕ್ಷೆ ಬಹಳ ಮುಖ್ಯ. ಸ್ನಾತಕೋತ್ತರ ಪದವಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈಗಿನಿಂದಲೇ ಸಿದ್ಧರಾಗಿ!

1. PGCET-2026: ಕಿರುನೋಟ (Quick Overview)

ವಿವರಗಳು

ಅಧಿಕೃತ ಮಾಹಿತಿ

ಪ್ರಾಧಿಕಾರದ ಹೆಸರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)

ಪರೀಕ್ಷೆಯ ಹೆಸರು

ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ- PGCET-2026

ಪ್ರವೇಶ

ಮೊದಲನೇ ವರ್ಷದ / 1ನೇ ಸೆಮಿಸ್ಟರ್ ಗಳ MBA, MCA, M.E, M.Tech, M.Arch

ಅರ್ಜಿ ಸಲ್ಲಿಕೆ ವಿಧಾನ

ಆನ್‌ಲೈನ್ ಮೂಲಕ (Online Application)

ಅಧಿಕೃತ ವೆಬ್‌ಸೈಟ್

https://cetonline.karnataka.gov.in/kea/

2. ಪ್ರಮುಖ ದಿನಾಂಕಗಳು (Important Dates)

ಅರ್ಜಿ ಸಲ್ಲಿಸಲು ಕೊನೆಯ ಕ್ಷಣದವರೆಗೂ ಕಾಯಬೇಡಿ. ಕೆಳಗಿನ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ:

ಚಟುವಟಿಕೆ (Activity)

ದಿನಾಂಕ (Date)

ಆನ್‌ಲೈನ್ ಮೂಲಕ ನೊಂದಣಿ ಮತ್ತು ಅರ್ಜಿ ಸಲ್ಲಿಕೆ ಪ್ರಾರಂಭ

23-03-2026 ಬೆಳಿಗ್ಗೆ 11.00 ರಿಂದ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

08-04-2026 ರಾತ್ರಿ 11.59 ರೊಳಗಾಗಿ

ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ

10-04-2026 ರೊಳಗೆ

M.E / M.Tech ಪರೀಕ್ಷಾ ದಿನಾಂಕ

23-05-2026 (ಮಧ್ಯಾಹ್ನ 02.30 - 04.30)

MCA / MBA ಪರೀಕ್ಷಾ ದಿನಾಂಕ

24-05-2026

3. ಅರ್ಹತಾ ಮಾನದಂಡಗಳು (Eligibility Criteria)

ಯಾರೆಲ್ಲಾ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಎಂಬುದರ ಸ್ಪಷ್ಟ ಮಾಹಿತಿ ಇಲ್ಲಿದೆ:

  • ಸಾಮಾನ್ಯ ಅರ್ಹತೆ: ಅಭ್ಯರ್ಥಿಗಳು ಪ್ರವೇಶ ಪಡೆಯಲು ಅರ್ಹತೆ ಪಡೆಯುವುದಕ್ಕಾಗಿ PGCET-2026 ಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೊಂದಾಯಿಸಿಕೊಂಡು, ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
  • GATE ಅಭ್ಯರ್ಥಿಗಳು: GATE ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು M.E / M.Tech / M.Arch ಕೋರ್ಸ್‌ಗಳ ಪ್ರವೇಶಕ್ಕಾಗಿ PGCET-2026 ಗೆ ಹಾಜರಾಗಬೇಕಾಗಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸುವುದು ಕಡ್ಡಾಯ.
  • ಆರ್ಕಿಟೆಕ್ಚರ್ ಅಭ್ಯರ್ಥಿಗಳು: M.Arch ಪ್ರವೇಶಾತಿಗೆ ಅಭ್ಯರ್ಥಿಗಳು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್, ನವದೆಹಲಿ ರವರು ನಡೆಸುವ ಪಿಜಿಇಟಿಎ-2026 (PGETA-2026) ರಲ್ಲಿ ಅರ್ಹತೆ ಪಡೆದಿರಬೇಕು.
  • ಕರ್ನಾಟಕೇತರ ಅಭ್ಯರ್ಥಿಗಳು: SC/ST/OBC ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕೇತರ ಅಭ್ಯರ್ಥಿಗಳು ಎಂಬಿಎ / ಎಂಸಿಎ ಕೋರ್ಸುಗಳಿಗೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟು ಕೊಡುವ ಸೀಟುಗಳಿಗೆ ಮಾತ್ರ ಪ್ರವೇಶ ಪಡೆಯಬಹುದು.

4. ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ (Exam Pattern & Syllabus)

  • ವಿಧಾನ: ಪಿಜಿಸಿಇಟಿ ಅನ್ನು ಓಎಂಆರ್ (OMR) ಮೂಲಕ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಟ ಬಹು ಆಯ್ಕೆ ಮಾದರಿಯಾಗಿರುತ್ತದೆ.
  • ಕ್ಯಾಲ್ಕುಲೇಟರ್ ಬಳಕೆ: ನಾನ್-ಪ್ರೋಗ್ರಾಮೆಬಲ್ ಕ್ಯಾಲ್ಕುಲೇಟರ್‌ಗಳನ್ನು ಕೇವಲ M.E / M.Tech ಪರೀಕ್ಷೆಗೆ ಮಾತ್ರ ಅನುಮತಿಸಲಾಗಿದೆ.
  • ವಿನಾಯಿತಿ ಪಡೆದ ವಿಷಯಗಳು: Bio-Technology, Chemical Engineering, Environmental Engineering, Polymer Science, ಮತ್ತು Textile Technology ವಿಷಯಗಳಿಗೆ PGCET ಪರೀಕ್ಷೆಯನ್ನು ನಡೆಸುವುದಿಲ್ಲ. ವಿಷಯಗಳಿಗೆ ಪ್ರವೇಶಾತಿಯನ್ನು ಆಯಾ ಪದವಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೀಡಲಾಗುತ್ತದೆ.

ಪರೀಕ್ಷಾ ವೇಳಾಪಟ್ಟಿ (Exam Timetable):

ದಿನಾಂಕ / ದಿನ

ಸಮಯ

ಕೋರ್ಸ್

ಒಟ್ಟು ಅಂಕಗಳು

23-05-2026 (ಶನಿವಾರ)

ಮಧ್ಯಾಹ್ನ 02.30 - 04.30

M.E / M.Tech

100

24-05-2026 (ಭಾನುವಾರ)

ಬೆಳಿಗ್ಗೆ 10.30 - 12.30

MCA

100

24-05-2026 (ಭಾನುವಾರ)

ಮಧ್ಯಾಹ್ನ 02.30 - 04.30

MBA

100

5. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (How to Apply Online?)

  • ಹಂತ 1: KEA ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
  • ಹಂತ 2: ಆಸಕ್ತ ಅಭ್ಯರ್ಥಿಗಳು 23-03-2026 ಬೆಳಿಗ್ಗೆ 11.00 ರಿಂದ ಆನ್‌ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಿ.
  • ಹಂತ 3: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಮತ್ತು 10-04-2026 ರೊಳಗೆ ಶುಲ್ಕ ಪಾವತಿಸಿ.

6. ವಿವರವಾದ ಆಯ್ಕೆ ಪ್ರಕ್ರಿಯೆ (Detailed Selection Process)

  • ಆನ್‌ಲೈನ್ ಅರ್ಜಿ ಸಲ್ಲಿಕೆ: ಮೊದಲು ನಿಗದಿತ ದಿನಾಂಕದೊಳಗೆ (23-03-2026 ರಿಂದ 08-04-2026) ಆನ್‌ಲೈನ್ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕು.
  • ಲಿಖಿತ ಪರೀಕ್ಷೆ (PGCET Exam): ಮೇ 23 ಮತ್ತು 24 ರಂದು ನಡೆಯುವ 100 ಅಂಕಗಳ ವಸ್ತುನಿಷ್ಟ ಬಹು ಆಯ್ಕೆ ಮಾದರಿಯ (MCQ) ಪರೀಕ್ಷೆ ಬರೆಯುವುದು.
  • ಮೆರಿಟ್ ಲಿಸ್ಟ್ / ರಾಂಕಿಂಗ್: ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ KEA ರಾಂಕ್ ಲಿಸ್ಟ್ ಬಿಡುಗಡೆ ಮಾಡುತ್ತದೆ.
  • ದಾಖಲಾತಿ ಪರಿಶೀಲನೆ & ಕೌನ್ಸಿಲಿಂಗ್: ರಾಂಕಿಂಗ್ ಬಂದ ನಂತರ ನಿಮ್ಮ ಮೂಲ ದಾಖಲೆಗಳನ್ನು ಪರಿಶೀಲಿಸಿ, ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.

🔥 ಸತ್ಯ ಅವರ ವಿಶೇಷ ಸಲಹೆ ಮತ್ತು ಸ್ಟ್ರಾಟಜಿ

 ನನ್ನ ಪ್ರಿಯ ವಿದ್ಯಾರ್ಥಿಗಳೇ, PGCET ಪರೀಕ್ಷೆ ಕೇವಲ ಒಂದು ಎಂಟ್ರೆನ್ಸ್ ಅಲ್ಲ, ಇದು ನಿಮ್ಮ ಉಜ್ವಲ ಭವಿಷ್ಯದ ಬಾಗಿಲು. ಟಾಪ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲಿ ಕಡಿಮೆ ಶುಲ್ಕದಲ್ಲಿ ಸೀಟು ಪಡೆಯಲು ಇದು ಅತ್ಯುತ್ತಮ ಅವಕಾಶ. ನಾನು ಪ್ರಸ್ತುತ IBPS ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ 'ಟೈಮ್ ಮ್ಯಾನೇಜ್ಮೆಂಟ್' ಎಷ್ಟು ಮುಖ್ಯ ಎಂದು ಅರಿತಿದ್ದೇನೆ. ಅದೇ ಸ್ಟ್ರಾಟಜಿಯನ್ನು ನೀವಿಲ್ಲಿ ಬಳಸಬೇಕು:

·       ಸಮಯದ ನಿರ್ವಹಣೆ: ನೀವು ಕೇವಲ 120 ನಿಮಿಷಗಳಲ್ಲಿ 100 ಪ್ರಶ್ನೆಗಳಿಗೆ ಉತ್ತರಿಸಬೇಕು. ಹಾಗಾಗಿ ವೇಗ ಮತ್ತು ನಿಖರತೆ ಬಹಳ ಮುಖ್ಯ.

·       OMR ಪ್ರಾಕ್ಟೀಸ್: ಪರೀಕ್ಷೆಯು OMR ಶೀಟ್ ಮೂಲಕ ನಡೆಯುವುದರಿಂದ, ಮೊದಲೆ ರೌಂಡ್ ಮಾಡುವುದನ್ನು ಚೆನ್ನಾಗಿ ಅಭ್ಯಾಸ ಮಾಡಿ.

·       ಸಿಲೆಬಸ್ ಕಡೆ ಗಮನ: KEA ವೆಬ್‌ಸೈಟ್‌ನಲ್ಲಿ ಬಿಟ್ಟಿರುವ ಪಠ್ಯಕ್ರಮವನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಿ.

7. ಆನ್ಲೈನ್ ಅರ್ಜಿಗೆ ಬೇಕಾಗುವ ಪ್ರಮುಖ ದಾಖಲೆಗಳು (Documents Required)

ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ಪದವಿ ಅಂಕಪಟ್ಟಿಗಳು: ಎಲ್ಲಾ ಸೆಮಿಸ್ಟರ್‌ಗಳ ಮಾಕ್ಸ್ ಕಾರ್ಡ್‌ಗಳು (ಕೆಲವು ವಿಷಯಗಳಿಗೆ ಪದವಿ ಅಂಕಗಳೇ ಆಧಾರ ).
  • SSLC / 10ನೇ ತರಗತಿ ಅಂಕಪಟ್ಟಿ: ಜನ್ಮ ದಿನಾಂಕದ ಪರಿಶೀಲನೆಗಾಗಿ.
  • ಜಾತಿ ಮತ್ತು ಆದಾಯ ಪ್ರಮಾಣಪತ್ರ: ಕೇವಲ ಕರ್ನಾಟಕದ SC/ST/OBC ವಿದ್ಯಾರ್ಥಿಗಳಿಗೆ ಮೀಸಲಾತಿ ಪಡೆಯಲು.
  • GATE ಸ್ಕೋರ್ ಕಾರ್ಡ್: ಗೇಟ್ ಪರೀಕ್ಷೆ ಬರೆದ M.E/M.Tech ಆಕಾಂಕ್ಷಿಗಳಿಗೆ ಮಾತ್ರ.
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ, ಸಹಿ ಮತ್ತು ಮೊಬೈಲ್ ನಂಬರ್.

8. ಅರ್ಜಿ ಸಲ್ಲಿಸುವಾಗ ತಪ್ಪುಗಳನ್ನು ಮಾಡದಿರಿ! (Don't Make These Mistakes)

  • ಕೊನೆಯ ದಿನಾಂಕದವರೆಗೆ ಕಾಯುವುದು: ಏಪ್ರಿಲ್ 08, 2026 ರಾತ್ರಿ 11.59 ರವರೆಗೆ ಕಾಯಬೇಡಿ. ಕೊನೆಯ ಘಳಿಗೆಯಲ್ಲಿ ಸರ್ವರ್ ಬ್ಯುಸಿ ಆಗಬಹುದು.
  • ಗೇಟ್ (GATE) ವಿದ್ಯಾರ್ಥಿಗಳ ನಿರ್ಲಕ್ಷ್ಯ: GATE ಅಂಕವಿದ್ದರೆ ಪರೀಕ್ಷೆ ಬರೆಯುವಂತಿಲ್ಲ, ಆದರೆ KEA ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಹಾಕಿ ಶುಲ್ಕ ಪಾವತಿಸುವುದು ಕಡ್ಡಾಯ! ಇದನ್ನು ಮರೆಯಬೇಡಿ.
  • ಕರ್ನಾಟಕೇತರ ಅಭ್ಯರ್ಥಿಗಳ ಮೀಸಲಾತಿ ಗೊಂದಲ: SC/ST/OBC ಮೀಸಲಾತಿ ಕೇವಲ ಕರ್ನಾಟಕದವರಿಗೆ ಮಾತ್ರ ಅನ್ವಯಿಸುತ್ತದೆ. ಬೇರೆ ರಾಜ್ಯದವರು ಕೇವಲ ಮ್ಯಾನೇಜ್ಮೆಂಟ್ ಕೋಟಾ ಸೀಟುಗಳಿಗೆ ಮಾತ್ರ ಅರ್ಹರು.

9. ಪ್ರಮುಖ ಲಿಂಕ್‌ಗಳು (Important Links)

ಪ್ರಮುಖ ಲಿಂಕ್‌ಗಳು

ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್ (Official Website)

 https://cetonline.karnataka.gov.in/kea/

ನಮ್ಮ ಟೆಲಿಗ್ರಾಮ್ ಗ್ರೂಪ್ ಸೇರಲು

  Sathya Job Alerts Telegram Group ಲಿಂಕ್

10. ಪದೇ ಪದೇ ಕೇಳಲಾಗುವ ಪ್ರಶ್ನೆಗಳು (Top FAQs)

Q1: PGCET 2026 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಉತ್ತರ: ಅರ್ಜಿ ಸಲ್ಲಿಸಲು 08-04-2026 (ರಾತ್ರಿ 11:59) ಹಾಗೂ ಶುಲ್ಕ ಪಾವತಿಸಲು 10-04-2026 ಕೊನೆಯ ದಿನಾಂಕವಾಗಿದೆ.

Q2: ಬಾರಿಯ ಪರೀಕ್ಷೆಯ ಮಾದರಿ (Exam Pattern) ಹೇಗಿದೆ?

ಉತ್ತರ: ಪರೀಕ್ಷೆಯು OMR ಆಧಾರಿತವಾಗಿದ್ದು, ಒಟ್ಟು 100 ಅಂಕಗಳ ಬಹು ಆಯ್ಕೆ (Multiple Choice) ಪ್ರಶ್ನೆಗಳಿರುತ್ತವೆ. ಪರೀಕ್ಷಾ ಅವಧಿ 120 ನಿಮಿಷಗಳು.

Q3: ಗೇಟ್ (GATE) ಪಾಸ್ ಆದವರು PGCET ಬರೆಯಬೇಕಾ?

ಉತ್ತರ: ಇಲ್ಲ, ಮಾನ್ಯತೆ ಪಡೆದ GATE ಅಂಕ ಹೊಂದಿರುವವರು M.E / M.Tech ಕೋರ್ಸ್‌ಗಳ ಪ್ರವೇಶಕ್ಕಾಗಿ ಪರೀಕ್ಷೆ ಬರೆಯಬೇಕಾಗಿಲ್ಲ. ಆದರೆ ಕಡ್ಡಾಯವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕು.

Q4: ಕೆಲವು ಇಂಜಿನಿಯರಿಂಗ್ ವಿಷಯಗಳಿಗೆ ಪರೀಕ್ಷೆ ಇರುವುದಿಲ್ಲವಂತೆ, ನಿಜವೇ?

ಉತ್ತರ: ಹೌದು, Bio-Technology, Chemical Engineering, Environmental Engineering, Polymer Science, ಮತ್ತು Textile Technology ವಿಷಯಗಳಿಗೆ ಪ್ರತ್ಯೇಕ ಪರೀಕ್ಷೆ ಇರುವುದಿಲ್ಲ. ಪದವಿ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.

Q5: ಹೊರರಾಜ್ಯದ (Non-Karnataka) ವಿದ್ಯಾರ್ಥಿಗಳಿಗೆ ಮೀಸಲಾತಿ ಇರುತ್ತದೆಯೇ?

ಉತ್ತರ: ಇಲ್ಲ. SC/ST/OBC ಮೀಸಲಾತಿ ಕೇವಲ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ. ಹೊರರಾಜ್ಯದ ಅಭ್ಯರ್ಥಿಗಳನ್ನು ಎಂಬಿಎ / ಎಂಸಿಎ ಆಡಳಿತ ಮಂಡಳಿ (Management) ಸೀಟುಗಳಿಗೆ ಮಾತ್ರ ಪರಿಗಣಿಸಲಾಗುತ್ತದೆ.

Q6: M.Arch ಕೋರ್ಸ್‌ಗೆ ಪ್ರವೇಶ ಪಡೆಯುವುದು ಹೇಗೆ?

ಉತ್ತರ: M.Arch ಪ್ರವೇಶಾತಿಗೆ ಅಭ್ಯರ್ಥಿಗಳು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್, ನವದೆಹಲಿ ನಡೆಸುವ PGETA-2026 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.

 

📢 ನಮ್ಮ ಕಮ್ಯುನಿಟಿಗೆ ಸೇರಿ! (Join Our Community for Instant Updates!)

ಯಾವುದೇ ಪ್ರಮುಖ ಶೈಕ್ಷಣಿಕ ಮಾಹಿತಿಗಳು, ಜಾಬ್ ಅಲರ್ಟ್‌ಗಳನ್ನು ತಪ್ಪಿಸಿಕೊಳ್ಳಬೇಡಿ!

👉 ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಆಗಿ: SATHYA'S KANNADA INFO

👉 ವೆಬ್‌ಸೈಟ್‌ಗೆ ಭೇಟಿ ನೀಡಿ: sathya-jobalerts.com 

Post a Comment

0 Comments